ಪ್ರತಿ ದಿನ ನನ್ನ ಮಾತು ಕೇಳದೆ,
ದಿನವೆಲ್ಲ ನಿನ್ನ ನೋಡಿದರೂ,
ದಿನಪೂರ್ತಿ ನಿನ್ನ ನೆನೆವಂತೆ ಮಾಡಿದೆಯಲ್ಲೋ
ಯಾರೋ ನೀನು?
ನಿನ್ನ ಹೆಸರೇನೋ?
ಕಲ್ಪನೆಗೂ ಮೀರಿದ ಒಲವಿರಲು,
ನಿನ್ನೆದುರು ಏನೂ ನುಡಿಯದಂತೆ ಮಾಡಿದೆಯಲ್ಲೋ
ಯಾರೋ ನೀನು?
ನಿನ್ನ ಹೆಸರೇನೋ?
ನಿನ್ನ ನಗುವಿಂದ , ನಾನು ನಗಲು,
ಪ್ರತಿ ನಿತ್ಯ ನೆನೆದ ಚಂದಿರನ ನೆನೆಯದಂತೆ ಮಾಡಿದೆಯಲ್ಲೋ
ಯಾರೋ ನೀನು?
ನಿನ್ನ ಹೆಸರೇನೋ?
ಮೊದಲ ನೋಟದಲ್ಲೇ ನನಗಾಗಿ ಹುಟ್ಟಿದ ಅನುಭವ ನೀಡಿ,
ಪ್ರೀತಿಯ ನಿಜ ರೂಪ ತಿಳಿಸಿ, ಪ್ರೀತಿಗೊಂದು ಹೊಸ ಅರ್ಥ ಕೊಟ್ಟವನು
ನೂರು ಜನ್ಮದ ಪ್ರೀತಿ ಕೊಟ್ಟ ,
ಯಾರೋ ನೀನು?
ನಿನ್ನ ಹೆಸರೇನೋ?
No comments:
Post a Comment