Thursday 29 December 2011

ಕನಸು ಕಾಣುವ ಬನ್ನಿ........



ಬಾಲ್ಯ ದಿಂದಲೂ ನಾನು ಕನಸು ಕಾಣುತ್ತ ಬೆಳೆದ ಹುಡುಗಿ, ಅಮ್ಮ ಪಪ್ಪಾ ನ ಚೆನ್ನಾಗಿ ನೋಡ್ಕೋಬೇಕು, ಅವ್ರ ಕಣ್ಣಲ್ಲಿ ನನ್ನ ಬಗ್ಗೆ ಹೆಮ್ಮೆ ಇರಬೇಕು, ಅಂತ ಕನಸು ಇತ್ತು...ನನ್ನ ಮಗಳು ಅನ್ನೋ ಹೆಮ್ಮೆ ಹೆತ್ತ ತಾಯಿ ಗಿದ್ದರೆ, ನನ್ನನ್ನು ಅವರ  ಅಮ್ಮ ಅನ್ನೋ ಬಯ ನನ್ನ ಪಪ್ಪನಿಗೆ, ಪ್ರೀತಿಯ ಜೀವನ ನಮ್ಮದಾಗಬೇಕು ಅನ್ನೋದು ನನ್ನ ಬಾಲ್ಯದ, ಮತ್ತು ಇಂದಿನ ಬಹು ದೊಡ್ಡ ಕನಸು........
ಕನಸು ಕಂಡೆ, ನನ್ನೊಳಗೆ ಮಿಂಚಿದ ಒಂದು ಆಲೋಚನೆಯ ಬೆನ್ನು ಹತ್ತಿ ಹೋಗುವ ಕನಸು....

ಗುಟ್ಟಾಗಿ , ಸಿಟ್ಟಾಗಿ, ಪೆದ್ದು ಕನಸು, ಮುದ್ದು ಕನಸು, ಜೀವನದಲ್ಲಿ ಏನೇನೋ ಕನಸು...ಆದರೆ ಕನಸು ಕಾಣಲೇನು ಬಯ?

ನಮ್ಮ ಕನಸುಗಳಿಗೆ ಅದ್ಬುತವಾದ ಶಕ್ತಿ ಇದೆ..!!!!ಕನಸು ಕಂಡರೆ ಸಾಕು ಅದಕ್ಕೆ ಹಾರೋ ರೆಕ್ಕೆ ತನ್ನಿಂತಾನೆ ಬಂದು ಬಿಡುತ್ತದೆ, ಕನಸಿನ ಬೀಜ ಮೊಳಕೆಯೋಡೆಯುತ್ತದೆ...ಹಾರಲು..!!!ಕನಸುಗಳು ನಮ್ಮನ್ನು ಕೊಂಡೊಯುತ್ತದೆ, ಸಪ್ತ ಸಮುದ್ರದ ಆಚೆಗೆ, ಹಿಮಾಲಯಕ್ಕೆ, ಕೆಲವೊಮ್ಮೆ ಕನಸುಗಳು ನಮ್ಮನ್ನು ಕೊಂಡೊಯ್ಯಬಲ್ಲವು, ಕಲ್ಪನಾ ರಂತೆ ಅಂತರಿಕ್ಷಕ್ಕೂ...!!!!!!

ಸಣ್ಣ ವಯಸ್ಸಿಂದಲೂ ನಾನು ಕನಸು ಕಂಡು ಬೆಳೆದ ಹುಡುಗಿ... ಅಂಗಳದಲ್ಲಿನ  ಸೀಬೆ ಮರದಲ್ಲಿ ಕುಳಿತು, ಇನ್ನು ಎತ್ತರಕ್ಕೆ ಹತ್ತಬೇಕು, ಇನ್ನು ಹತ್ತಬೇಕು, ಯಾರು ಮುಟ್ಟದ ಆ ಕೊನೆ ನಾನು ಮುಟ್ಟಬೇಕು, ಅನ್ನೋ ಆಸೆ.. ಹತ್ತಿ, ಬಿದ್ದು, ಮತ್ತೆ ಹತ್ತಿ, ಅಮ್ಮ ಬೈದು, ಹಠ ಮಾಡಿ, ಕೊನೆಗೂ ಹತ್ತಿ ಬಿಡುತ್ತಿದ್ದೆ.. ಆವಾಗ ಅಮ್ಮನಿಗೆ ನನ್ನ ಆ ಹಠ ಇಷ್ಟ ಆಗುತ್ತಿತು...!!!ಕೊನೆಗೂ ನನ್ನ ಹಟ ಸಾದಿಸಿ ಕೊಂಡ ಹುಡುಗಿ,...

Friday 9 December 2011

ಮೌನ ತಾಳದ ಮನಸ್ಸು




ನನ್ನ  ಮನಸ್ಸು ಮೌನದೊಳಿತ್ತು...
ನಾ ಮೌನದೊಳಿದ್ದೆ; ಗೊತ್ತಿಲ್ಲ...
ಆದರೆ ಹೃದಯದ ಬಾವನೆ,
ಮನಸಿನ ಮೌನವ ಬೇದಿಸಿತ್ತು..
ಬೇದಿಸಿ ತನ್ನೊಳಗೆ ಮಾತಾಡಿತ್ತು..
ಮರೆಯದೆಯೂ ಮರೆತಂತಿರುವ ಸತ್ಯಗಳು,..!!!!!
ಸತ್ಯವೆಂದೇ ನಂಬಿದ ಬ್ರಮೆಗಳು...
ಉಸಿರಿನೊಂದಿಗೆ ಬೆರೆತ ನೆನಪುಗಳು...
ಬದುಕಿನಲ್ಲಿ ಹೆಣೆದು ಜೋಪಾನವಗಿರಿಸಿದ ಕನಸುಗಳು...
ಬದುಕಿನಲ್ಲಿ ನಂಬಿಕೊಂಡು ಬಂದ ಆದರ್ಶಗಳು,..
ಅಮ್ಮ ಕಲಿಸಿದ ಸಂಪ್ರದಾಯಗಳು, 
ಯಾರಿಗೂ ತೋರಿಸದೆ ಮನದೊಳಗೆ ಬಚ್ಚಿಟ್ಟ ಬಾವನೆಗಳು,..
ಕ್ಷಣ ಕೂಡ ಕಳೆಯಲಾರದೆ ಕಳೆದ ಅದೆಷ್ಟೋ  ಕ್ಷಣಗಳು...!!!!!!!
ನೆನಪಾಗಿ ಹೃದಯದ ಕಟ್ಟೆ ಒಡೆದಿತ್ತು...
ಮೌನ ಮನಸಲ್ಲಿ ಮಾತಾಡಿತ್ತು..
ಎಂದು ಕೇಳದ ಪ್ರಶ್ನೆಯೊಂದ ಕೇಳಿತ್ತು....!
ಉತ್ತರ ಬರಿ  ಮೌನದೊಳಗಿತ್ತು...!!!!!!


ತಾಯಿ





ಹೇಳದೆಯೇ,.. 
ತಿಳಿದುಕೊಂಡು,.. 
ಕೇಳದೆಯೇ,.. 
ಬಯಸಿದ್ದನ್ನು,.. 
ನೀಡುವ,.. 
ಬಗವಂತನಿಂದ,..
ಬೂಮಿಗೆ,..
ಕಳುಹಿಸಲ್ಪಟ್ಟ,..
ಕಲಿಯುಗದ,.. 
ಕಾಮದೇನು!!!.....  

ನೆನಪು





ಬದುಕಿನ ಆಗಸದಿಂದ, 
ಒಮ್ಮೆ ಮರೆಯಾದರು, ಮತ್ತೆ  ಮತ್ತೆ,...!
ಹುಣ್ಣಿಮೆ ಚಂದ್ರನ ತರ,   
ಬಂದು ನಗುವ ಶಶಿ...!!! 

ನೀನಿಲ್ಲದ ಬದುಕು




ಗೆಳೆಯಾ ನೀನಿಲ್ಲದ ಬದುಕು,... 
ಕಂಡಿತೆನಗೆ,... 
ನಕ್ಷತ್ರವಿಲ್ಲದ ಮೋಡ ಕವಿದ ಆಗಸದಂತೆ...!!1
ಎಲೆಯಿಲ್ಲದ ಮರದಂತೆ,... 
ಕೋಗಿಲೆಯಿಲ್ಲದ ಮಾಮರದಂತೆ,... 
ದೇವರಿಲ್ಲದ ಗುಡಿಯಂತೆ,...!!!  

ಬದುಕು







ಸೋಲುಗಳ ಸರಣಿ ನೋವು ನೀಡಿ,
ಗೆಲುವಿಗೆ ಸೋಪಾನ ನೀಡುವುದೇ,..
ಈ ಬದುಕು...!!!
ಕಮರಿದ ಮನಸುಗಳಿಗೆ,
ಮಗದೊಮ್ಮೆ ಚೈತನ್ಯ ತುಂಬುವುದೇ,...
ಈ  ಬದುಕು...!!!
ಬಿತ್ತಿದ ಕನಸಿನ ಮೊಗ್ಗು,
ಅರಳದಿದ್ದಾಗ ಮತ್ತೊಂದು,...
ಕನಸಿಗೆ ಪ್ರೇರಣೆಯೇ,...
ಈ ಬದುಕು...!!!
ಇಂದಲ್ಲಾ ನಾಳೆ,
ನಾಳೆಯದಲ್ಲ ನಾಡಿದ್ದು,...
ಎನ್ನುತ್ತಾ ನಿರಂತರ ಹುಡುಕಾಟವೆ,...
ಈ ಬದುಕು...!!!

ಕಾಗದದ ಹೂ







ನೋಡಲು ಅತೀ ಸುಂದರ,
ಅರಳಿತು ಬಣ್ಣವಿಲ್ಲದೆ,..
ಪರಿಮಳವಿಲ್ಲದೆ,..
ನೋಡಲು ತಂಪು...!
ಮನಕೆ ಇಂಪು...!
ಆದರೆ  ಬೆಳೆಯಿತು ಕಂಪಿಲ್ಲದೆ,...
ಯಾರಾದರು ಕೊಳ್ಳಬಹುದೆಂಬ ಕಾತುರ...!
ಜೀವನದಲಿ ನಿರಂತರ ತನ್ನವರಿಗಾಗಿ ಆತುರ...!
ಬಾಡದೇ ಅರಳಿ,...
ಮತ್ತೆ ನಿಂತಿತು,...
ಮತ್ತೊಬ್ಬ ಕೊಳ್ಳುವವನಿಗಾಗಿ  ಕಾಯುತ...!!! 

ಅಮ್ಮ ನಿನಗಿನ್ನೊಂದು ಕಾಣಿಕೆ







ಅಮ್ಮ  ಅಂತ ನಾನು,
ಕರೆದ ಆ  ಪದ, 
ಆ ದಿನ  ಆ ಕ್ಷಣ,   
ಅದೆಷ್ಟು ನಿನಗೆ ಸಂತೋಷ ನೀಡಿರಬಹುದು!!!,
ಅಂತಹ ದಿನಕ್ಕಾಗಿ, 
ನಾನು  ಕಾಯುತ್ತಿರುವೆನಮ್ಮ , 
ಆ ಸಂತೋಷ, 
ಆ ದಿನವನ್ನು ಮತ್ತೆ ನಿನಗೆ ನೀಡಲು ,  
ನಿನಗೆ ಆನಂದವೆನಮ್ಮ ???

ಪ್ರಕೃತಿ ರಹಸ್ಯ









ಎರಡು ದೇಹಗಳು ಒಂದಾಗಿ,
ಬರುವುದು ಪ್ರೀತಿಯ ಕೂಸು ಹೂವಾಗಿ,
ದಾಟಿತು ಬಾಲ್ಯ,
ಮುಟ್ಟಿತು ಹರೆಯ,
ಮತ್ತದೇ ಜೀವನ ಚಕ್ರ...!!!
ಮೊಳೆಯಿತು ಕನಸು,
ಬೆರೆಯಿತು ಮನಸು,
ಒಂದಾಯಿತು ಎರಡು ಮನಸು,
ಇದು ಪ್ರಕೃತಿ ಸಹಜ ನಿಯಮ...!!!
ಇದೇ ರಹಸ್ಯ,
ಇದೇ ಜೀವನ..
ಇಲ್ಲಿಂದ ಪ್ರಾರಂಬವಾಗುವುದು  ಹೊಸ ಜೀವನ...!!!
ಇದೇ ಜೀವನ ಚಕ್ರ, ಇದೇ ಪ್ರಕೃತಿ ರಹಸ್ಯ...!!!

ಹೆಣ್ಣು...




ಬಾಲ್ಯದಲ್ಲಿ ಹೆಣ್ಣು,
ಮನೆಯವರೆಲ್ಲರ ಕಣ್ಣು..,
ಹಾರಾಡುವಳು ಹಕ್ಕಿಯಂತೆ,
ಎಲ್ಲೆಲ್ಲೂ ಮನ ಬಂದಂತೆ..!!!

ಆಕೆ ಬೆಳೆದಂತೆ,
ಕತ್ತರಿಸಿ ಹಾಕುವರು ರೆಕ್ಕೆಯನ್ನೇ..,
ಆಕೆ ಕಳೆದುಕೊಳ್ಳುತ್ತಾಳೆ,
ತನ್ನ ಸ್ವಾತಂತ್ರವನ್ನೇ..!!!

ಕಳೆಯುತ್ತಾಳೆ ಆಕೆ,
ತನ್ನ ಜೀವನವನ್ನು..,
ಆಶ್ರಯಿಸುತ್ತಾ ಸದಾ,
ಪರರನ್ನೇ...!!!

ಕಾಣುತ್ತಾಳೆ ಜೀವನದಲ್ಲಿ,
ದುಃಖವನ್ನೇ..,
ಕಾಯುತ್ತಾ ನಾಳಿನ,
ದಿನವನ್ನೇ...!!!

ಪರರಿಗಾಗಿ ಕೊಡುತ್ತ ತನ್ನ, 
ಕನಸಿನ ಬಲಿದಾನವನ್ನೇ ...,
ಹೊರುತ್ತಾಳೆ ತ್ಯಾಗಮಯಿ,
ಎಂಬ ಪಟ್ಟವನ್ನೇ...!!!

ಸಮಾಜ ಬಂದಿಸುತ್ತಾ,
ತನ್ನ ಸಂಕೋಲೆಯಲ್ಲಿ...,
ಕೊಲೆಗೈಯುತ್ತದೆ ಆಕೆಯ ಆಸೆಗಳನ್ನೇ,
ಕೊನೆಗೆ ಸಹಿಸಲಾಗದೆ ಈ ಭಾರ...!!!

ಆಕೆ ಹೋಗುತ್ತಾಳೆ,
ಈ ಪ್ರಪಂಚದಿಂದ...,
ದೂರ..ದೂರ,
ಬಲುದೂರ...!!!

ಕಂಬನಿ




ಕಣ್ಣು 
ತುಂಬಿ...,
ಕರಗಿದ 
ಇಬ್ಬನಿ...

ಬದುಕು ಬದಲಿಸಬಹುದು

 "ನಾನಿರುವುದೆ ಹೀಗೆ ಇನ್ನೊಬ್ಬರಿಗೋಸ್ಕರ  ನಾನು ಏಕೆ ಬದಲಾಗಬೇಕು, ಬೇಕಾದರೆ ಅವರೇ ಬದಲಾಗಲಿ" (Let People change), ಎಂದುಕೊಂಡಿರುವವರು ಕಂಡಿತ ಬದಲಾಗಲು ಸಾಧ್ಯವಿದೆ. .Nothing Is Impossible . .ಆಯ್ಕೆ ನಿಮ್ಮ ಕೈಯಲ್ಲಿದೆ..ಬದುಕು ನೋವು, ನಲಿವು, ನಿಟ್ಟುಸಿರು,  ಸಂಗರ್ಷಗಳಿಂದಲೇ ತುಂಬಿದೆ... ಸೋಲನ್ನು ನೋವನ್ನು ಕೆಲವೊಂದು ಸಾರಿ ನಾವು ಮಾಡದೆ ಬರುವ ಅಪವಾದವನ್ನು ಹೇಗೆ ಎದುರಿಸಬೇಕು ಎಂಬುದು ನಮ್ಮ ಅನುಭವದ ಮೇಲೆಯೇ ನಿಂತಿದೆ... ಆ  ಅನುಭವಕ್ಕಾಗಿ ನಾವು ಜೀವನದಲ್ಲಿ ಮುಂದುವರಿಯಲೇ ಬೇಕು.. ಸಮಸ್ಯೆಯ  ಬೆನ್ನು ಹತ್ತಿ ಹೋಗಲೇ ಬೇಕು..

                         ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗುವುದು, ಪರಿಸ್ಥಿತಿ  ಎದುರಿಸಲಾಗುವುದು..ಅವಮಾನಕ್ಕೆ ಉತ್ತರ ನೀಡಿದಂತಾಗುವುದು...ಜೀವನವನ್ನು ಬಿದ್ದಲ್ಲಿ ಮುಗಿಸದೆ, ಕೊಡವಿ ಎದ್ದು ಮುನ್ನಡೆಸುವ ತಾಕತ್ತನ್ನು ನಮ್ಮ ಅನುಭವ ನೀಡುತ್ತದೆ...
                       ಜೀವನ ನಮಗೆ  ಸ್ಪೂರ್ತಿ ಯಾಗಿರಬೇಕು, ಬದುಕಿನುದ್ದಕ್ಕೂ ಸ್ನೇಹಿತೆಯಾಗಿರಬೇಕು, ಸಂಗಾತಿಯಾಗಬೇಕು..
ಜಾತಿ- ಮತ- ಭಾಷೆ- ದೇಶಗಳ ಹೆಸರಿನಲ್ಲಿ ನಾವು ನಾವೇ ಕಟ್ಟಿಕೊಂಡಿರುವ ಸಣ್ಣತನಗಳನ್ನು ತೆಗೆದುಹಾಕಿ, ಪ್ರೀತಿ-ಸಹನೆ- ವಿಶ್ವಾಸವನ್ನು ಬೆಳೆಸಿಕೊಂಡರೆ ಬದುಕು ಬದಲಿಸಬಹುದು.. ಕಳೆದುಕೊಂಡ ಪ್ರೀತಿಯ ಬಗ್ಗೆ ಚಿಂತಿಸುತ್ತಾ ಕೂರದೆ, ಮುನ್ನಡೆದರೆ ಬದುಕು ಬದಲಿಸಬಹುದು.. ನಾಳೆ ಮಾಡುವುದನ್ನು ಇಂದೇ ಮಾಡಿ ಇಂದಿನದನ್ನು ಈಗಲೇ ಮಾಡಿದರೆ ಬದುಕು ತನ್ನಿಂತಾನೆ ಬದಲಾಗುತ್ತದೆ..
                       




 "Time   ಇಲ್ಲಾ madam Time ಇಲ್ಲಾ",  ಅನ್ನೋದನ್ನು ನಾವು ತುಂಬಾ ಬಾರಿ ಕೇಳಿರಬಹುದು.. ನಿಜವಾಗ್ಲೂ ಸಮಯವಿಲ್ಲವೇ ಹೇಳಿ?ನಿಮ್ಮ ಮಗುವನ್ನು ಆಡಿಸಲು, ನಿಮ್ಮ ಹೆಂಡತಿ ಜೊತೆ 2 ಶಬ್ದ ಮಾತ್ಹನಾದ್ಲು, ಒಂದು ಸುಂದರ ಸಂಜೆ ಕಳೆಯಲು...  "ಅಯ್ಯೋ Time ಇಲ್ಲಾ madam"  ಅಂತೀರಾ...!!ಟೈಮ್ ಇರಲ್ಲಾರಿ ಟೈಮ್ ಮಾಡ್ಕೊಬೇಕು..ಅದೇ ಬದಲಾವಣೆ.. ಈಗ ನಿಮ್ಮನ್ನೇ ನೀವು ಕೇಳಿಕೊಳ್ಳಿ "ನಿಜವಾಗ್ಲೂ time ಇಲ್ವಾ "...
                      ನಮ್ಮನ್ನ ನಾವು ಬದಲಿಸಿಕೊಂಡರೆ ಕಂಡಿತ ಬದುಕು ಬದಲಿಸಬಹುದು..ನಿಮಗೆ ಪ್ರವಾಸ ಹೋಗುವ ಮನಸಿದ್ದರೆ, ಇವತ್ತಿನ್ನಿಂದಲೇ ಕುಡಿಕೆಗೆ ಕಾಸು ಕೂಡಿ ಹಾಕಿ.. ಆಗ ಕನಸಿಗೂ ರೆಕ್ಕೆ ಬರುತ್ತದೆ.. ಹಿಮಾಲಯದಾಚೆಗೆ, ಸಮುದ್ರದಾಚೆಗೆ, ಮುಂದೆ ಕಲ್ಪನಾರಂತೆ ಆಕಾಶಕ್ಕೂ!!! ನಮ್ಮ ಕನಸುಗಳಿಗೆ ಎಂತಹ ಶಕ್ತಿ ಇದೆ ಎಂದು ಇಂದೇ ರೆಕ್ಕೆ ಕೊಟ್ಟು ನೋಡಿ.. ನಾನು ಯಾವಾಗಲು(ಸಣ್ಣವಯಸ್ಸಿನ್ನಿಂದಲೂ) ಕನಸು ಕಾಣುವ ಹುಡುಗಿ.. ನನ್ನ ಮನೆಯ ಅಂಗಳದಲ್ಲಿ ಕುಳಿತು ಕಂಡ ಕನಸುಗಳವು.. ಕೆಲವು ಬಾಡಿ ಹೋಗಿದೆ, ಕೆಲವೊಂದಕ್ಕೆ ರೆಕ್ಕೆ ಬಂದಿದೆ.. ಈಗಲೂ ಕೂಡ ಕನಸಿನ ಪಟ್ಟಿ ಬೆಳೆಯುತ್ತಲೇ ಇದೆ, ಬದುಕು ಬದಲಿಬಳು ಹೊಸ ಹೊಸ ಕನಸುಗಳು ಬೇಕು...
                     Emily Bronte ಯ "Wuthering Heights " ಓದಿದ್ದೆ, ಅಲ್ಲಿಗೆ ಹೋಗಬೇಕೆಂಬ ಆಸೆ ಇದೆ.. ರೆಕ್ಕೆಗಳು  ಮೂಡಿವೆ, ಹಾರಲು ಜೀವನದಲ್ಲಿ ಒಂದರ ನಂತರ ಒಂದಾಗಿ ಬರುವ ಕಷ್ಟಗಳು, ಬದುಕಿನ ವಿಪರ್ಯಾಸ.. ನನಗೆ ನನ್ನ ಕನಸಿನ ಮೇಲೆ ಭರವಸೆ ಇದೆ, ಬದುಕು ಬದಲಿಸಲು ಭರವಸೆ ಇರಬೇಕು, ಬದುಕು ಭರವಸೆ ಕೇಳುತ್ತದೆ..ಭರವಸೆಯಲ್ಲಿ ಬದುಕಿದೆ..
                    ಮೊನ್ನೆ  ಪೇಪರ್ ಓದುವಾಗ ನನಗೆ ನಂಬಲಾಗಲಿಲ್ಲ, 7 ನೇ ಕ್ಲಾಸ್ ಹುಡ್ಹುಗ ಫಸ್ಟ್ ಬರಲಿಲ್ಲ  ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ..ಈ ಪರೀಕ್ಷೆಗಳಲ್ಲಿ  ಫಸ್ಟ್ ಬರಲೇಬೇಕೆಂಬ ಹಠ ಕಲಿಸಿದವರು ಯಾರು?? ಜೀವನವೇ ಮುಗಿದು ಹೋಯಿತು  ಎಂದು ಹೇಳಿ ಕೊಟ್ಟವರ್ಯಾರು??  
                   ಕಾಲೇಜು ದಿನಗಳಲ್ಲಿ ಯಾವುದೇ ಸ್ಪರ್ದೆ ಇದ್ದರೂ ನನಗೆ ಫಸ್ಟ್ ಬರಬೇಕೆಂಬ ಯಾವ ಆಸೆಯೂ ಇರಲಿಲ್ಲ.. ಆ compitition feeling ಕೂಡ ಇರಲಿಲ್ಲ.. ನನ್ನಷ್ಟಕ್ಕೆ ಓದಿ ಬರೆಯುತ್ತಿದ್ದೆ..ಮೊದಲನೆಯವಳಾಗೂ ಇರುತ್ತಿದ್ದೆ.. ಆದರೆ ನನ್ನ ಗೆಳತಿಯ  ಅಮ್ಮ ಅವಳಿಗೆ,    "ನೀನೆ ಮೊದಲು ಬರಬೇಕು" ಎನ್ನುತ್ತಿದ್ದರಾದರು, ಅದು ನನ್ನ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡುತ್ತಿರಲಿಲ್ಲ.. ನನ್ನ ಅಮ್ಮ ಕೂಡ ಹೇಳುತ್ತಿದ್ದರು, "ಓದದೆಯೇ ನೀನು ಇಷ್ಟು ಒಳ್ಳೆ ಬರಿತಿಯ!! ಓದಿದರೆ ಎಷ್ಟು ಬರಬಹುದು??"..ಎಂದು ಹೇಳಿ ನನ್ನಲ್ಲಿ ಹುಮ್ಮಸ್ಸು ತುಂಬಲು ಪ್ರಯತ್ನಿಸುತ್ತಿದ್ದರಾದರೂ, "ನನಗೆ ಇಷ್ಟೇ  ಸಾಕು" ಎಂಬುದು ನನ್ನ ಅಭಿಪ್ರಾಯವಾಗಿತ್ತು..
                 ನಿಜ ಆತ್ಮಹತ್ಯೆಗೆ ಕಾರಣ ಹೆತ್ತವರ   ಒತ್ತಡ ಇರಬಹುದು..ಪರಿಸರದ ಒತ್ತಡ ಇರಬಹುದು.. ನಾವು ಮಕ್ಕಳಿಗೆ ಗೆಲ್ಲುವುದನ್ನೇ ಹೇಳಿಕೊಡುತ್ತೇವೆ, ಫಸ್ಟ್  ಬರುವುದನ್ನೇ ಹೇಳಿಕೊಡುತ್ತೇವೆ.. ಅವರು ಅದನ್ನೇ  ನಿಜವಾದ ಜೀವನ ಅಂದುಕೊಂಡು ಬಿಡುತ್ತಾರೆ.. ನಾವು ಅವರಿಗೆ  "ಲೀಡರ್ ಆಗುವುದನ್ನು, ಮುನ್ನುಗ್ಗುವುದನ್ನು ಹೇಳಿಕೊಡುತ್ತೇವೆ".. ಆದರೆ ಸೋಲನ್ನು ಕಲಿಸಿರುವುದಿಲ್ಲ, ಸೋಲನ್ನು ಕಲಿಸಬೇಕಾಗಿಲ್ಲ, ಎದುರಿಸುವುದನ್ನು ಕಲಿಸಿದರೆ ಬದುಕು ಬದಲಿಸಬಹುದು...

ಮದುವೆ




ಎರಡು ಮನಸುಗಳು,
ಎರಡು ಹೃದಯಗಳು,..
ಎರಡು ಕನಸುಗಳು...
ಇದರೊಂದಿಗೆ ಪ್ರಾರಂಬ,...
ಹೊಸ ಜೀವನದ ಗಟ್ಟಗಳು...!!!