Thursday 29 December 2011

ಕನಸು ಕಾಣುವ ಬನ್ನಿ........



ಬಾಲ್ಯ ದಿಂದಲೂ ನಾನು ಕನಸು ಕಾಣುತ್ತ ಬೆಳೆದ ಹುಡುಗಿ, ಅಮ್ಮ ಪಪ್ಪಾ ನ ಚೆನ್ನಾಗಿ ನೋಡ್ಕೋಬೇಕು, ಅವ್ರ ಕಣ್ಣಲ್ಲಿ ನನ್ನ ಬಗ್ಗೆ ಹೆಮ್ಮೆ ಇರಬೇಕು, ಅಂತ ಕನಸು ಇತ್ತು...ನನ್ನ ಮಗಳು ಅನ್ನೋ ಹೆಮ್ಮೆ ಹೆತ್ತ ತಾಯಿ ಗಿದ್ದರೆ, ನನ್ನನ್ನು ಅವರ  ಅಮ್ಮ ಅನ್ನೋ ಬಯ ನನ್ನ ಪಪ್ಪನಿಗೆ, ಪ್ರೀತಿಯ ಜೀವನ ನಮ್ಮದಾಗಬೇಕು ಅನ್ನೋದು ನನ್ನ ಬಾಲ್ಯದ, ಮತ್ತು ಇಂದಿನ ಬಹು ದೊಡ್ಡ ಕನಸು........
ಕನಸು ಕಂಡೆ, ನನ್ನೊಳಗೆ ಮಿಂಚಿದ ಒಂದು ಆಲೋಚನೆಯ ಬೆನ್ನು ಹತ್ತಿ ಹೋಗುವ ಕನಸು....

ಗುಟ್ಟಾಗಿ , ಸಿಟ್ಟಾಗಿ, ಪೆದ್ದು ಕನಸು, ಮುದ್ದು ಕನಸು, ಜೀವನದಲ್ಲಿ ಏನೇನೋ ಕನಸು...ಆದರೆ ಕನಸು ಕಾಣಲೇನು ಬಯ?

ನಮ್ಮ ಕನಸುಗಳಿಗೆ ಅದ್ಬುತವಾದ ಶಕ್ತಿ ಇದೆ..!!!!ಕನಸು ಕಂಡರೆ ಸಾಕು ಅದಕ್ಕೆ ಹಾರೋ ರೆಕ್ಕೆ ತನ್ನಿಂತಾನೆ ಬಂದು ಬಿಡುತ್ತದೆ, ಕನಸಿನ ಬೀಜ ಮೊಳಕೆಯೋಡೆಯುತ್ತದೆ...ಹಾರಲು..!!!ಕನಸುಗಳು ನಮ್ಮನ್ನು ಕೊಂಡೊಯುತ್ತದೆ, ಸಪ್ತ ಸಮುದ್ರದ ಆಚೆಗೆ, ಹಿಮಾಲಯಕ್ಕೆ, ಕೆಲವೊಮ್ಮೆ ಕನಸುಗಳು ನಮ್ಮನ್ನು ಕೊಂಡೊಯ್ಯಬಲ್ಲವು, ಕಲ್ಪನಾ ರಂತೆ ಅಂತರಿಕ್ಷಕ್ಕೂ...!!!!!!

ಸಣ್ಣ ವಯಸ್ಸಿಂದಲೂ ನಾನು ಕನಸು ಕಂಡು ಬೆಳೆದ ಹುಡುಗಿ... ಅಂಗಳದಲ್ಲಿನ  ಸೀಬೆ ಮರದಲ್ಲಿ ಕುಳಿತು, ಇನ್ನು ಎತ್ತರಕ್ಕೆ ಹತ್ತಬೇಕು, ಇನ್ನು ಹತ್ತಬೇಕು, ಯಾರು ಮುಟ್ಟದ ಆ ಕೊನೆ ನಾನು ಮುಟ್ಟಬೇಕು, ಅನ್ನೋ ಆಸೆ.. ಹತ್ತಿ, ಬಿದ್ದು, ಮತ್ತೆ ಹತ್ತಿ, ಅಮ್ಮ ಬೈದು, ಹಠ ಮಾಡಿ, ಕೊನೆಗೂ ಹತ್ತಿ ಬಿಡುತ್ತಿದ್ದೆ.. ಆವಾಗ ಅಮ್ಮನಿಗೆ ನನ್ನ ಆ ಹಠ ಇಷ್ಟ ಆಗುತ್ತಿತು...!!!ಕೊನೆಗೂ ನನ್ನ ಹಟ ಸಾದಿಸಿ ಕೊಂಡ ಹುಡುಗಿ,...

4 comments:

  1. ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುವೆ.
    ಹೊಸ ವರ್ಷದ ಶುಭಾಶಯಗಳು.

    ReplyDelete
  2. ಚೆನ್ನಾಗಿದೆ ನಿಮ್ಮ ಬ್ಲಾಗ್.... ನೀವು ಕಂಡ ಕನಸುಗಳೆಲ್ಲಾ ನನಸಾಗಲಿ....ಈ ಬ್ಲಾಗ್ ನಲ್ಲಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಬರಹಗಳು ಮೂಡಿ ಬರಲಿ......

    ಹೊಸ ವರ್ಷದ ಶುಭಾಶಯಗಳು....

    ReplyDelete
  3. thank you sir...
    ಹೊಸ ವರ್ಷದ ಶುಭಾಶಯಗಳು...

    ReplyDelete
  4. ಕನಸುಗಳಲ್ಲಿ ಅಗಾಧ ಶಕ್ತಿ ಇದೆ ಎ೦ಬುದು ಸರಿಯಾದ ಮಾತು. ನನಸಾಗುವ ಹಾದಿಯಲ್ಲಿ ಸಾಕಷ್ಟು ಚಾಲೆ೦ಜ್ ಗಳು ಎದುರಾಗುತ್ತವೆ. ನಿಮ್ಮ ಸಾಧನಾ ದಾರಿ ಸುಗಮವಾಗಿರಲಿ ಎ೦ಬುದು ನನ್ನ ಹಾರೈಕೆ. ಅಭಿನ೦ದನೆಗಳು.

    ಅನ೦ತ್

    ReplyDelete