Saturday 15 December 2012

ಮರೆಯಲಾರೆ

ಮರೆವೆನೆಂದರೆ ಮರೆಯಲಿ 
ಹೇಗೆ  ನನ್ನ ಪ್ರೀತಿಯ..! 

ನಿನಗೆ ನಾ  ತೋರಿದ ಆ 
ಪ್ರೀತಿಯ ರೀತಿಯ,..!!

Wednesday 31 October 2012

ಭರವಸೆ



                                                           ನೀನೆ  ನೀಡಿದೆ ಬದುಕು,
                                                           ನೀನೆ ನೀಡಿದೆ ಬೆಳಕು..!
                                                           ನೀನಾಗಿದ್ದೆ ನನ್ನ  ಬಾಳಿಗೆ  ನೆರಳು,
                                                           ನೀಡಿದ್ದೆ ಸಂತೋಷದ ಹೊನಲು ....!!

                                                           ಅಂದು ನನ್ನದಾಗಿದ್ದು,
                                                           ಇಂದು ನನ್ನಲ್ಲಿಲ್ಲ,...!
                                                           ಹೇಳು ಗೆಳೆಯ ,
                                                           ಎಲ್ಲಿ ಕೊಟ್ಟೆ ಎಲ್ಲ???  ಭರವಸೆ 

ಹೇಳು


ಕನಸೇ ಯಾಕೋ ಚೆನ್ನ ಅಲ್ಲೇ ಬರುವುದು ರೆಕ್ಕೆ,
ಅಸಲಿಯಲಿ ಗುರಿಯಾಗುವ ಬದಲು ನಿನ್ನ ತಿರಸ್ಕಾರಕ್ಕೆ,..
ಬರಿ ಹೃದಯಕ್ಕೆ ಇಷ್ಟೊಂದು ನೋವು ಯಾಕೆ??
ಆಗಿದೆ ಆರದ  ಗಾಯ ಈ ಹೃದಯಕ್ಕೆ..!


ಮತ್ತೆ ಮತ್ತೆ ಈ ಕಣ್ಣಿಗೆ ನಿನ್ನ ನೋಡುವ ಆಸೆ ಏಕೆ??
ಈ ಹೃದಯಕ್ಕೆ ನಿನ್ನ ಹಾಗೆ  ಯಾರು ಅನ್ನಿಸುವುದಿಲ್ಲವೋ ಹಾಗೆ..!
ಅನಿರೀಕ್ಷಿತವಾಗಿ ಸಿಕ್ಕಿದ ನೀನು..,
ನಾ ನಿರೀಕ್ಷಿಸಿದ ಪ್ರೀತಿ ಕೊಡುವೆ ಏನು??...

ಎಲ್ಲೆಲ್ಲು ನೀನೆ


ಏನೋ ರೋಮಾಂಚನ,


ನನ್ನ ಕಣ್ಣಲಿ ನಿನ್ನ ನೋಡಲು,..!


ನನ್ನ ಕನಸಲು ಬಣ್ಣ,


ಅಲ್ಲೂ ನೀನೆ ಬರಲು..!!!

Tuesday 9 October 2012

ಅಮ್ಮ ನಿನ್ನ ಮನದಾಳದಲ್ಲಿ



ಅಮ್ಮ ನಿನ್ನ ಮನದಾಳದಲ್ಲಿ  ಅದೆಷ್ಟೊಂದು ಒಲವು ,
ಅರಳೋ ಹೂವಿನ ಚೆಲುವು ...
ನಿನ್ನ  ಪ್ರೀತಿಯ ಮಡಿಲಲ್ಲಿ  ಅದೆಷ್ಟು ಸೆಳೆತ ತಾಯೇ?
ಎಂದು ಕೈ ಬಿಡದ  ಮಾಯೆ...!!

ನಿನ್ನ ಎದೆಗೂದಲ್ಲಿ ತಬ್ಬಿಕೋ ಒಮ್ಮೆ  ನನ್ನ,
ನಮ್ಮಿ  ಜೊತೆ ಎಷ್ಟು ದಿನ ?..
ಪ್ರಪಂಚ ತೋರಿಸಿದ  ಮೊದಲ ಗುರು ನನಗೆ ನೀನು ,
ಉಣಿಸಿದೆ ಪ್ರೀತಿಯ ಜೇನು ..!!

ನೀನೆ ನನ್ನ ಮೊದಲು,
ನೀನೆ ನನಗೆ ಕೊನೆಯೂ,..!
ಬಂದೆ ಬರುವೆನು  ಮತ್ತೆ ಬರುವೆ ನಿನ್ನ ತೊಡೆಗೆ, ..
ನಿನ್ನ ಮಮತೆಯ  ಸಾಗರದ  ಕಡೆಗೆ...!!

Monday 8 October 2012

ಹೆಣ್ಣಿನ ಅಳಲು



ಇದು ಒಂದು ಹೆಣ್ಣಿನ ನೋವು..,
ಹುಟ್ಟಿದ ಮನೆಯ ಮತ್ತು ಮೆಟ್ಟಿದ ಮನೆಯ ನಡುವಿನ ಕಾವು....!!

ತವರಿನಲ್ಲಿ ಈಕೆ ರಾಣಿ,ಸಿರಿ ತಂದ ಪುಣ್ಯವಂತೆ,..
ಮೆಟ್ಟಿದ ಮನೆಯನ್ನು ಬೆಳಗುತಿಹ ಭಾಗ್ಯವಂತೆ,...
ಇಬ್ಬರೂ ಇವಳಿಗೆ ಎರಡು ಕಣ್ಣಿನಂತೆ,..
ಅರಿಯದೆ ಪೇಚಾಡುತಿಹರು ಪ್ರಾಣಿಗಳಂತೆ,..
ಹುಟ್ಟಿದ ಮನೆಗೆ ತವರಿಗೆ ಸ್ವಂತವೆ....?
ಮೆಟ್ಟಿದ ಮನೆಗೆ ಇವಳು ಅನಾಥಳೆ....?
ಬಾಗಿನ ಪಡೆಯಲು ಬರುವಳು ತವರಿಗೆ,
ಸಿರಿ ಸಂಪದ ತುಂಬಿ ತುಳುಕಲೆಂದು ಹಾರೈಸಿ ನಡೆವಳು,
ಮುತ್ತೈದೆ ಭಾಗ್ಯವ ಪಡೆಯಲೆಂದು ಬೇಡುವಳು,
ಮೆಟ್ಟಿದ ಮನೆಯ ಕ್ಷೇಮಕ್ಕಾಗಿ ದಣಿವಳು.....!!

ಈಗ ಹೇಳಿ ಇವಳು ಯಾರ ಸೊತ್ತು.. ??
ಇವಳಿಗೇನು ಬೇಕೆಂಬುದು ಯಾರಿಗೆ ಗೊತ್ತು... ??

ಎಲ್ಲಿರುವೆ?

ನನ್ನ ಕಲ್ಪನೆಯ ರೂಪವೇ ,
ನನ್ನ ಕಂಗಳ ಕನಸೇ ,
ನನ್ನ ಜೀವನದ ಸಹಬಾಗಿಯೇ ,
ನನ್ನ ಕನಸಿನ ಪ್ರತಿರೂಪವೇ ,
ಬೇಗ ಹೇಳು ನೀ ಎಲ್ಲಿರುವೆ ಎಂದು?

ಕಲ್ಪನೆಯಲ್ಲಿ ಕಟ್ಟಿದ ಕವಿತೆಯೇ,
ಕಣ್ಣಲ್ಲಿ ಅಸೆ ತಂದ ಮಿಂಚೆ,
ಈ ಹೊಸ ಬಾಳಿನ ಅರ್ಥವೇ,
          ನೀನೆ ಹೇಳು ನಾ ಎಲ್ಲಿರುವೆ ಎಂದು??

Friday 5 October 2012

ನನ್ನ ಜೀವನ ರೂಪ

 

ನನ್ನೊಳಗೆ ಅಡಗಿದ  ಪ್ರೀತಿಯ ರೂಪ,
ಜೀವ ಪಡೆಯಿತು  ಮುದ್ದು ಕಂದನ ರೂಪ..
ನಾ ನಿನ್ನೊಳಗೆ ಇರುವೆನೆಂದು ನೀ ನನಗೆ ತೋರಿದ ಆ ಪರಿ,
ನೋವೆಲ್ಲ ಮರೆಸಿ ನೀಡಿತು ಹಿತವಾದ ಕಚಗುಳಿ...
ಹೇಗಿರುವೆ? ಎಂಥಿರುವೆ? ಎಂದು ಕಾತರಿಸಿತು ಅಂದು ಮನ,
ನನ್ನ ಕಲ್ಪನೆಯು ಚಿತ್ರಿಸಿತು ನಿನ್ನ ಪ್ರತಿರೂಪವನ್ನ...!
ಇರುವೆ ನೀನು ನನ್ನಂತೆ..,
ನೀನಿರಲು ನನಗೇನು ಚಿಂತೆ?..
ನಾ ಮರೆತೆ ನವ ಮಾಸಗಳ ಬಿರು  ಬೇಗುದಿ,
ನೀ ನನ್ನ ಮಡಿಲಲ್ಲಿ ಹುಟ್ಟಿ ಬಂದು ನಕ್ಕ ಕ್ಷಣದಿ..
ದೇವರ  ದೀಪದ ಬೆಳಕಂತೆ ನಿನ್ನ ನಗು,
ಕೊನೆವರೆಗಿನ ಬಂದನವಿದು ನನಗು,ನಿನಗೂ..!!
 ನಿನ್ನ ನಗು ಕಂಡು ನಾ ಮರೆತೆ ನನ್ನೇ,
ನಿನ್ನ ಸ್ಪರ್ಶಕೆ ನಾ ಕರಗಿ ಹೋದೆ ಹೆಣ್ಣೇ ..
ಅಮ್ಮ ಅನ್ನೋ ಆ  ದಿನ ಮರೆವೆ ಜಗವನ್ನೇ,
ನಿನಗಿ ಕಂದ ಮೀಸಲಿಡುವೆ ನನ್ನ ಈ ಬದುಕನ್ನೇ...!!!

 

Wednesday 30 May 2012

ಸಪ್ತಪದಿ











ಸಪ್ತಪದಿ ಇದು ಸಪ್ತಪದಿ
ಈ ಏಳು ಹೆಜ್ಜೆಗಳ ಸಂಬಂಧ
ನಮ ಏಳು ಜನ್ಮಗಳ ಅನುಬಂಧ

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೆ
ಇದಕೆ ಹರಿಯ ಸಾಕ್ಷಿ ಎನ್ನುವೆ.!
ಸ್ವರ್ಗ ಸಮಾನ ಸುಖವ ನೀಡೆಂದು ಕೈಗಳನು ಮುಗಿವೆ
ಎರಡನೆ ಹೆಜ್ಜೆಯನು ಇಡುವೆ..!!

ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೆ
ಮೂರನೆ ಹೆಜ್ಜೆಯನು ಇಡುವೆ...!!!
ಮಮತೆ ಮೋಹ ಸುಖ ದುಃಖದಲ್ಲಿ ಜೊತೆಯಲ್ಲೇ ಇರುವೆ
ನಾಲ್ಕನೆ ಹೆಜ್ಜೆಯನು ಇಡುವೆ....!!!!

ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನ್ನುತ
ಐದನೆ ಹೆಜ್ಜೆಯನು ಇಡುವೆ.....!!!!!
ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನ್ನುವೆ
ಆರನೇ ಹೆಜ್ಜೆಯನು ಇಡುವೆ......!!!!!!

ಸಪ್ತ ಋಷಿಗಳ ಸ್ಮರಣೆ ಮಾಡುತ ಹರಸಿ ನಮ್ಮನು ಎಂದು ಬೇಡುತ
ಏಳನೇ ಹೆಜ್ಜೆ ಇಡುವೆ
ನಾ ಏಳನೇ ಹೆಜ್ಜೆ ಇಡುವೆ.......!!!!!!!

Saturday 19 May 2012

ಸಾದ್ಯವೇ ???





ನಿನ್ನ  ಬಗ್ಗೆ  ಎಲ್ಲ  ತಿಳಿದೂ
ನಿನ್ನ  ಪ್ರೀತಿಸುತ್ತಿರುವೆ,..!!

ಎಂದಿಗೂ ಸಾಯದ  ಕೆಲವು  ನೆನಪುಗಳು,..!!!
ಹೃದಯದಲ್ಲಿ ಮುಚ್ಚಿಟ್ಟ  ಕೆಲವು ಸತ್ಯಗಳು, ..!!!
ಇನ್ನು ಜೀವಂತ ವಾಗಿರುವ  ಕೆಲವು ಬಾವನೆಗಳು..!!
ನೋಡಿಯೂ ನೋಡದಂತೆ ಕಣ್ಣು ಮುಚ್ಚಿಕೊಂಡ  ಕ್ಷಣಗಳು..!!
ರಾತ್ರಿ ಎಲ್ಲ  ಅತ್ತು ಬೆಳಗ್ಗೆ  ನಕ್ಕ  ದಿನಗಳು,
ನೋವಿನಿಂದ  ಬಳಲಿದ  ಅದೆಷ್ಟೋ  ಸರಿ,

ನನ್ನ ಹೃದಯ   ಕೇಳುತ್ತೆ,

ಇಂದಿಗೂ,

ಮರೆಯಲು ಸಾದ್ಯವೇ ???

ಕವಿತೆ



ಬಳಲಿದೆ ಬೆಳಕು 
ಕರಗುತ್ತಿದೆ ಈ  ನಿರೀಕ್ಷೆಯ 
"ಮೊಂಬತ್ತಿ"..!!!!!

ನಡುಗಿದೆ ಬದುಕು 
ನಿನ್ನದೇ ನೆನಪಿನ 
"ಬೆನ್ನತ್ತಿ"..!!!!!!!!!

ಯಾರೋ ನೀನು?




 ಪ್ರತಿ ದಿನ ನನ್ನ ಮಾತು ಕೇಳದೆ,

ದಿನವೆಲ್ಲ  ನಿನ್ನ ನೋಡಿದರೂ,
ದಿನಪೂರ್ತಿ ನಿನ್ನ   ನೆನೆವಂತೆ ಮಾಡಿದೆಯಲ್ಲೋ
ಯಾರೋ ನೀನು?
ನಿನ್ನ ಹೆಸರೇನೋ?

ಕಲ್ಪನೆಗೂ ಮೀರಿದ ಒಲವಿರಲು,
ನಿನ್ನೆದುರು ಏನೂ  ನುಡಿಯದಂತೆ ಮಾಡಿದೆಯಲ್ಲೋ
ಯಾರೋ ನೀನು?
ನಿನ್ನ ಹೆಸರೇನೋ?

ನಿನ್ನ ನಗುವಿಂದ , ನಾನು  ನಗಲು,
ಪ್ರತಿ ನಿತ್ಯ  ನೆನೆದ  ಚಂದಿರನ ನೆನೆಯದಂತೆ ಮಾಡಿದೆಯಲ್ಲೋ 
ಯಾರೋ ನೀನು?
ನಿನ್ನ ಹೆಸರೇನೋ?

ಮೊದಲ  ನೋಟದಲ್ಲೇ ನನಗಾಗಿ ಹುಟ್ಟಿದ  ಅನುಭವ ನೀಡಿ,
ಪ್ರೀತಿಯ  ನಿಜ  ರೂಪ  ತಿಳಿಸಿ, ಪ್ರೀತಿಗೊಂದು ಹೊಸ   ಅರ್ಥ  ಕೊಟ್ಟವನು
ನೂರು ಜನ್ಮದ  ಪ್ರೀತಿ ಕೊಟ್ಟ ,
ಯಾರೋ ನೀನು?
ನಿನ್ನ ಹೆಸರೇನೋ?

ಕೋರಿಕೆ




ಯಾವಾಗಲು   ಜೊತೆಯಾಗಿದ್ದ   ಗೆಳೆಯ  ಇನ್ನಿಲ್ಲ,
ಕಷ್ಟ   ಆದಾಗ  ಹೇಳಿಕೊಳ್ಳಲು ಯಾರು ಇಲ್ಲ ..
ಹಸಿವು, ನೋವು ನಲಿವನ್ನ   ಹಂಚಿಕೊಂಡ  ಜೀವ  ನನ್ನದಲ್ಲ ,
ಈಗ,
ಒಬ್ಬಂಟಿ  ಯಾಗಿರಲು  ಕಲಿತ  ಜೀವ  ಇದು,
ನೋವಿನಲ್ಲಿ  ಅಳೋ ವಾಗ   ನನಗೆಂದು  ಒಂದು ತೋಳಿಲ್ಲ,
ಸಮಾಧಾನ  ಮಾಡೋಕೆ ಬೇಕು ಜೀವ,
ಕಣ್ಣೀರನ್ನು ಒರೆಸುವ  ಕೈ ಬೇಕು..!!!

ಪ್ರೀತಿಯ ಕನಸು




ನೂರಾರು ಕನಸಲ್ಲಿ  ಪ್ರೀತಿ  ಕನಸು ಒಂದಾಯಿತು..!!
ಮನದಲ್ಲಿ  ಹೊಸ ಖುಷಿ ಯೊಂದು ಮೂಡಿ,
ನಾನು  ಯಾರೆಂಬುದನ್ನು ಮರೆಸಿತು ...!!!
ಹುಚ್ಚು ಮನಸು ಪ್ರೀತಿ ಬಯಸಿತು..!!
ನೆನಪಿನ  ಪುಟವೊಂದು ತಿರುವಿ, 
ಹೃದಯದ  ಮೂಲೆಯಲ್ಲಿ ಕನವರಿಸಿತು...!!!
ಕಣ್ಣ  ಹನಿಯು ಮಳೆಯಲ್ಲಿ ಸೇರಿತು..!!
ಮನಸ್ಸಿಗೇಕೋ ನಿರಾಳವಾದ  ಅನುಭವ ..!!
ಮತ್ತದೇ  ನಗು, ಮತ್ತದೇ ಮಳೆ...!!!!!

Sunday 18 March 2012

ಒಮ್ಮೆ ಬಾ..!!



ಈ ಪ್ರೀತಿ ಕರಗಿ ಹೋಗುವ ಮುನ್ನ,
ತಿರುಗಿ ನೋಡೋ ನನ್ನ ಚೆಲುವ..!!
ನಿನ್ನ ಮೊದಲ ದಿನದ ಪ್ರೀತಿನ ಮರೆತು ಬಿಡುವ ಮುನ್ನ,
ತಿರುಗಿ ಕೊಡು  ಆ ಪ್ರೀತಿಯ..!!!!!

ನಾನು ನಿನ್ನ ಕಣ್ಣಿಂದ ಮರೆಯಾಗೋ ಮುನ್ನ,
ಕಣ್ಣಲ್ಲಿ ಕಣ್ಣಿಟ್ಟು ನೋಡಿಬಿಡು ಈ ಹೃದಯವ..!!
ಈ ಪ್ರೀತಿಯಾ ಬರಹ ಅಳಿಸಿ ಹೋಗುವ ಮುನ್ನ,
ಓದಿಕೊಳ್ಳೋ ನನ್ನ ಮನದ ಈ ಕವನವ..!!!!!

ಈ ಚೆಲುವು ಬಾಡುವ ಮುನ್ನ,
ಮುಡಿಸು ಬಿಡು ಪ್ರೀತಿಯ ಹೂವಾ..!!
ಕೊನೆ ಯಾ ಬಾರಿ ದೂರ ಅಗೋ ಮುನ್ನ,
ಬಿಗಿಯಾಗಿ ಅಪ್ಪಿಕೊಳ್ಳೋ ಗೆಳೆಯ..!!!!!

ನಾ ನಿನ್ನ ಬಳಿಯಿರುವಾಗಲೇ,
ಒಪ್ಪಿಕೊಳ್ಳೋ ಗೆಳೆಯ..!!
 ಪ್ರೀತಿ ಹಸಿರಾಗಿರುವಾಗಲೇ,
ಒಮ್ಮೆ ಪ್ರೀತಿ ಹೇಳಿ ಬಿಡು ಗೆಳೆಯ..!!!!!

ನೀನು ನನ್ನವನು ಎಂಬ ಬಾವ ಇನ್ನು ಬದುಕಿರುವಾಗ..!!!!!!!!

Sunday 15 January 2012

ಪುಣ್ಯಕೋಟಿ ಎಂಬ ಗೋವಿನ ಹಾಡು

ಪ್ರತಿ ಸರಿ ಸಂಕ್ರಾತಿ ದಿನ ನನಗೆ ನೆನಪಾಗೋ ಹಾಡು ಇದು..ಆ ಕಾಲದಲ್ಲಿ ಪ್ರಾಣಿಗಳಿಗೆ ಇದ್ದ ನಂಬಿಕೆ ಈಗಿನ ಕಾಲದಲ್ಲಿ ಮನುಷ್ಯನಿಗೆ ಮನುಷ್ಯನ ಮೇಲೆ ಇಲ್ಲ..ಎಲ್ಲದಕ್ಕೂ guarantee ಬೇಕೇ ಬೇಕು..ಕೊಟ್ಟ ಮಾತು ಉಳಿಸೋ ಜನರು ತುಂಬ ಕಮ್ಮಿ ಆಗಿದ್ದರೆ, ಆ ಗೊಲ್ಲ ನಿಗೂ ಕೂಡ ತನ್ನ ಜೊತೆ ಇದ್ದ ಕರು ಗಳ ಹೆಸರು ಗೊತ್ತು, ಪ್ರತಿ ಜಾಗದ ಹೆಸರು ಗೊತ್ತು, ಆದರೆ ಈಗ ನಮಗೆ ಪಕ್ಕದ ಮನೆಯವರ ಹೆಸರು ಗೊತ್ತಿಲ್ಲ, ನಮ್ಮ ಜೊತೆ ಕೆಲಸ ಮಾಡೋ ಜನರ ಹೆಸರು ಗೊತ್ತಿಲ್ಲ...ಎಲ್ಲ google ಮಯವಾಗಿದೆ...ಈಗ ಪುಣ್ಯಕೋಟಿ ಯಂಥ ಮಾತು ಉಳಿಸಿ ಕೊಳ್ಳೋ ಜನರು ಇಲ್ಲ, ಕಾಳಿಂಗ ನಂತೆ ತಾಳ್ಮೆ ಇಂದ ಕಾಯೋ ಜನರು ಇಲ್ಲ...ಹುಲಿ ಯಂಥ ದುಷ್ಟ ಕೂಡ ತನ್ನ ಹಸಿವನ್ನು ತಡೆದು ಕಾದಿದ್ದು ಈಗಿನ ಕಾಲದ ಮಕ್ಕಳಿಗೆ ಸುಳ್ಳನಿಸುತ್ತೆ... ಈ ಹಾಡು ೩ ನೇ ಕ್ಲಾಸ್ ನಲ್ಲಿ ಓದಿದ್ದು, ದಿನ ರಾತ್ರಿ ಅತ್ತು ಅಮ್ಮ ನನ್ನನ್ನು  ಸಮಾದಾನ ಮಾಡಿದ್ದು, ನೆನಪಿದೆ.. ಈವಾಗಲು ನೆನಸಿಕೊಂಡರೆ ತುಂಬ ಅಳು  ಬರುತ್ತೆ....ಮನಸ್ಸಿಗೆ ಸಣ್ಣ ವಯಸ್ಸಿನಲ್ಲಿ ತುಂಬ ನಾಟಿದ ಹಾಡು ಇದು, ಸತ್ಯ ಬಿಟ್ಟು ಬೇರೇನೂ ಹೇಳಬಾರದು ಎಂದು ಅಮ್ಮ ಕಲಿಸಿದಾಗ ಹೇಳಿ ಕೊಟ್ಟ ಹಾಡು ಇದು...ಕೊಟ್ಟ ಮಾತು ಜೀವ ಕೊಟ್ಟಾದರೂ ಉಳಿಸಿಕೊಳ್ಳ ಬೇಕು ಎಂದು ಅಮ್ಮ  ಹೇಳಿ ಕೊಟ್ಟಾಗ ಹೇಳಿ ಕೊಟ್ಟ ಹಾಡು ಇದು... ಜೀವನದ ಪಾಠ  ಕಲಿಸಿ ಕೊಟ್ಟ ಹಾಡು ಇದು...



ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.

ಕರುಗಳನು ನೆನೆನೆನೆದು
ಹಸುಗಳು ಕೊರಳ ಘಂಟೆ ಢಣಿರು
ಢಣಿರನೆ ಪರಿದು ಲಂಘ್ಹಿಸಿ ಚಿಮ್ಮಿ
ನೆಗೆಯುತ ಮರಳಿ ಬಂದವು ದೊಡ್ಡಿಗೆ.

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು.

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ.

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ.

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ನೀನು ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.

ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು
ಬೆಟ್ಟದ ಕಿಬ್ಬಿಯೊಳು ತಾನಿದ್ದನು.

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು.

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
 ಚೆಂದದಿ ತಾ ಬರುತಿರೆ.

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು.

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು.

 ಒಂದು ಬಿನ್ನಹ ಹುಲಿಯೆ ಕೇಳೈ
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು.

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದನಿನ್ನನು ನೋಡಿ ಹೋಗುವೆ
ನೆಂದು ಬಂದೆನೆ ದೊಡ್ಡಿಗೆ.

ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
 ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು.

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ ತ
ಬ್ಬಲಿಯನೀ ಕರುವನು.

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗ ಬೇಡ
ದುಷ್ತವ್ಯಾಘ್ರನು ಹೊಂಚುತಿರುವನು ನ
ಟ್ಟನಡುವಿರು ಕಂದನೆ.

ತಬ್ಬಲಿಯು ನೀನಾದೆ ಮಗನೆ
 ಹೆಬ್ಬುಲಿಯ ಬಾಯನ್ನು ಹೊಗುವೆನು
 ಇಬ್ಬರಾ ರುಣ ತೀರಿತೆಂದು
ತಬ್ಬಿ ಕೊಂಡಿತು ಕಂದನ.

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು.

 ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು.

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.