Friday 9 December 2011

ಮೌನ ತಾಳದ ಮನಸ್ಸು




ನನ್ನ  ಮನಸ್ಸು ಮೌನದೊಳಿತ್ತು...
ನಾ ಮೌನದೊಳಿದ್ದೆ; ಗೊತ್ತಿಲ್ಲ...
ಆದರೆ ಹೃದಯದ ಬಾವನೆ,
ಮನಸಿನ ಮೌನವ ಬೇದಿಸಿತ್ತು..
ಬೇದಿಸಿ ತನ್ನೊಳಗೆ ಮಾತಾಡಿತ್ತು..
ಮರೆಯದೆಯೂ ಮರೆತಂತಿರುವ ಸತ್ಯಗಳು,..!!!!!
ಸತ್ಯವೆಂದೇ ನಂಬಿದ ಬ್ರಮೆಗಳು...
ಉಸಿರಿನೊಂದಿಗೆ ಬೆರೆತ ನೆನಪುಗಳು...
ಬದುಕಿನಲ್ಲಿ ಹೆಣೆದು ಜೋಪಾನವಗಿರಿಸಿದ ಕನಸುಗಳು...
ಬದುಕಿನಲ್ಲಿ ನಂಬಿಕೊಂಡು ಬಂದ ಆದರ್ಶಗಳು,..
ಅಮ್ಮ ಕಲಿಸಿದ ಸಂಪ್ರದಾಯಗಳು, 
ಯಾರಿಗೂ ತೋರಿಸದೆ ಮನದೊಳಗೆ ಬಚ್ಚಿಟ್ಟ ಬಾವನೆಗಳು,..
ಕ್ಷಣ ಕೂಡ ಕಳೆಯಲಾರದೆ ಕಳೆದ ಅದೆಷ್ಟೋ  ಕ್ಷಣಗಳು...!!!!!!!
ನೆನಪಾಗಿ ಹೃದಯದ ಕಟ್ಟೆ ಒಡೆದಿತ್ತು...
ಮೌನ ಮನಸಲ್ಲಿ ಮಾತಾಡಿತ್ತು..
ಎಂದು ಕೇಳದ ಪ್ರಶ್ನೆಯೊಂದ ಕೇಳಿತ್ತು....!
ಉತ್ತರ ಬರಿ  ಮೌನದೊಳಗಿತ್ತು...!!!!!!


5 comments:

  1. ಅಶ್ವಿನಿಯವರೆ,
    ನಿಮ್ಮ ಕವನಗಳನ್ನು ಓದಿದೆ. ಹೃದಯದಿಂದ ನೇರವಾಗಿ ಬಂದಿವೆ ಈ ಕವನಗಳು. ನಿಮ್ಮಲ್ಲಿ ಕವಿಹೃದಯವಿದೆ. ನಿಮಗೆ ಉತ್ತರೋತ್ತರ ಅಭಿವೃದ್ಧಿಯನ್ನು ಹಾರೈಸುತ್ತೇನೆ.

    ReplyDelete
  2. ಧನ್ಯವಾದಗಳು ಸರ್.....ಯುವ ಬರಹಗಾರರಿಗೆ ನೀವು ರಚಿಸಿದ ವೇದಿಕೆ ನೋಡಿ ತುಂಬ ಸಂತೋಷವಾಯಿತು...ಹೀಗೆ ಪ್ರೋತ್ಸಾಹ ಸಿಗಲಿ...thank you...

    ReplyDelete
  3. ಮೌನದ ಬಟ್ಟಲಿಗೆ ಕಿವಿಯಾನಿಸಿದರೆ ಸಿಗುವುದು ಜೀವನದ ಹುಟ್ಟು...

    ಪ್ರೀತಿಯೊಂದಿಗೆ,
    ಗಿರಿ
    [ಹುಟ್ಟು => ದೋಣಿಯ ಮುನ್ನಡೆಸಲು ಅಂಬಿಗ ಉಪಯೋಗಿಸುವ ಸಲಕರಣೆ]

    ReplyDelete