Sunday, 17 January 2021

 ಸಹನೆಯ  

 ಅವಳು ನನಗೆ ಹೇಳಿದ್ದಳು ನಾನು ಹುಟ್ಟಿದ್ದು ನಿನಗಾಗಿ ಎಂದು,
 ಬದುಕಿದ್ದು ನಿನಗಾಗಿ ಎಂದು,
ನನ್ನ ಕನಸು ಈಗ ನಿನ್ನ ಕನಸೆಂದು

ಕಣ್ಣಲ್ಲಿ ಕನಸ ತೋರಿಸಿದವಳು ನನ್ನಮ್ಮ.,
ನನ್ನಿಂದ ಸಾದಿಸಲಾಗದ್ದು
ನನ್ನ ಮಗಳಾಗಿ ನೀನು ಸಾದಿಸಿ ತೋರಿಸು
ಎಂದು ಸಾದನೆಯ ದಾರಿ ತೋರಿದವಳು ನನ್ನಮ್ಮ ,

ಎದ್ದು ಬಿದ್ದಾದರು  ಮುಂದೆ ಬಾ ,
 ಮನಸ್ಸು ತುಂಬ ಛಲ,
ಕಣ್ಣ ಮುಂದೆ ಗುರಿ,
ಯಾವತ್ತು ನುಡಿ ಎಂದಳು ನನ್ನಮ್ಮ,
ಪ್ರಶ್ನೆ ಗೆ ಉತ್ತರವಾಗಲು ಕಲಿಸಿದವಳು ನನ್ನಮ್ಮ,

 ಮೈ ಕೊಡವಿ ನಿಂತು ಪರಿಸ್ಥಿತಿ ಎದುರಿಸುವ ದೈರ್ಯ  ಹೇಳಿಕೊಟ್ಟ ವಳು ನನ್ನಮ್ಮ
ದೋ ಎನ್ನ ಜೀವನ ಅವಳಿಗೆ ಶರಣು,


Wednesday, 8 April 2020

ಇನ್ನಾದರೂ ಸ್ವಲ್ಪ ಹೊತ್ತು...



ನಿನ್ನ ಹಚ್ಚಿಕೊಂಡಷ್ಟು,
ನನ್ನ ನಾನು ಮೆಚ್ಚಿಕೊಂಡಿದ್ದರೆ?
ಜೀವನದ ನಾಡಿ ಮಿಡಿತ ಲೆಕ್ಕ ಹಾಕುತ್ತಿದ್ದೆ.

ನಿನ್ನ ನಂಬಿದಷ್ಟು,
ನನ್ನ ನಾನು ನಂಬಿದ್ದರೆ?
ಎದೆಯ ದನಿಗೆ ಕಿವಿಗೊಡುತ್ತಿದ್ದೆ.

ನಿನ್ನ ನಗುವನ್ನು ಸಂಭ್ರಮಿಸಿದ್ದಷ್ಟು ,
ನನ್ನ ನಗು ಬಯಸಿದ್ದರೆ?
ಬದುಕಿನ ಕನಸಿನ ರಾಶಿಯನ್ನು  ಎಣಿಸುತ್ತಿದ್ದೆ.

ನಿನ್ನ ದುಃಖವನ್ನು ಅನುಭವಿಸಿದ್ದಷ್ಟು,
ನನ್ನ  ದುಃಖವನ್ನು  ಗಮನಿಸಿದ್ದರೆ?
ನಾನು ನಾನಾಗಿ ಉಳಿಯುತ್ತಿದ್ದೆ.

ನಿನ್ನ ಸಾಂಗತ್ಯ ದಲ್ಲಿ ಮುಳುಗಿದಷ್ಟು ,
ನನ್ನ  ಒಳಗನ್ನೂ ಬಲ್ಲವಳಾಗಿದ್ದರೆ?
ಮಾಗಿದ ತಿರುಳಾಗಿ ಇರುತ್ತಿದ್ದೆ.

ಇನ್ನಾದರೂ ತುಸು ಹೊತ್ತು,
ಬದುಕನ್ನು ನನಗಾಗಿ ಬದುಕಿ ಬಿಡುವೆ.

ಚೂರಾದ ಚಂದ್ರನ ಚೂರುಗಳು ಮರಳಿ
ಬರುವ ಕ್ಷಣಕ್ಕಾಗಿ ಹೀಗೆ ಕಾಯುತ್ತಲೇ ಇರುವೆ

ಇನ್ನಾದರೂ ಸ್ವಲ್ಪ ಹೊತ್ತು.....
ನನಗಾಗಿ ಬದುಕಿ ಬಿಡುವೆ...!

ಕನಸೇ ನೀ ಹೀಗೆ ಕಾಡದಿರು..!

ಕನಸೇ ನೀ ಕಾಡದಿರು
ಮನವ ಇನ್ನಷ್ಟು ಕಲಕದಿರು
ಈಗತಾನೆ ಶಾಂತವಾಗಿದೆ ಮನ
ತಲ್ಲಣಿಸದಿರು
ಚಿಗುರಿದ್ದ ಆಸೆ ಕಮರಿದೆ
ಹಾಗಾಗಿ ನೋವ ಉಣಿಸದಿರು
ಜೀವ ಹಿಂಡದಿರು

ಕನಸೇ ನೀ ಹೀಗೆ ಕಾಡದಿರು..!

ನಿನ್ನವರು ಯಾರು?

ಪ್ರೀತಿಯ ಅಪ್ಪುಗೆಯಿಲ್ಲ
ಗೆಳೆಯರು ಮೊದಲೇ ಇಲ್ಲ
ಯಾರ ಬೆಸುಗೆ ಇಲ್ಲ
ಕನಸು ಬೀಳಲು ನಿದ್ದೆಯಿಲ್ಲ
ನಿನಗೆ ನನ್ನ ನೆನಪಿಲ್ಲ
ಸಿಹಿ ನೆನಪುಗಳಿಲ್ಲ
ಕಹಿ ಅನುಭವವೇ ಎಲ್ಲ
ನನಗಾಗಿ ಮರುಗೋ ಜೀವವಿಲ್ಲ ..!
ನಿನ್ನವರು ಯಾರು ಮನವೇ?

Saturday, 15 December 2012

ಮರೆಯಲಾರೆ

ಮರೆವೆನೆಂದರೆ ಮರೆಯಲಿ 
ಹೇಗೆ  ನನ್ನ ಪ್ರೀತಿಯ..! 

ನಿನಗೆ ನಾ  ತೋರಿದ ಆ 
ಪ್ರೀತಿಯ ರೀತಿಯ,..!!

Wednesday, 31 October 2012

ಭರವಸೆ



                                                           ನೀನೆ  ನೀಡಿದೆ ಬದುಕು,
                                                           ನೀನೆ ನೀಡಿದೆ ಬೆಳಕು..!
                                                           ನೀನಾಗಿದ್ದೆ ನನ್ನ  ಬಾಳಿಗೆ  ನೆರಳು,
                                                           ನೀಡಿದ್ದೆ ಸಂತೋಷದ ಹೊನಲು ....!!

                                                           ಅಂದು ನನ್ನದಾಗಿದ್ದು,
                                                           ಇಂದು ನನ್ನಲ್ಲಿಲ್ಲ,...!
                                                           ಹೇಳು ಗೆಳೆಯ ,
                                                           ಎಲ್ಲಿ ಕೊಟ್ಟೆ ಎಲ್ಲ???  ಭರವಸೆ 

ಹೇಳು


ಕನಸೇ ಯಾಕೋ ಚೆನ್ನ ಅಲ್ಲೇ ಬರುವುದು ರೆಕ್ಕೆ,
ಅಸಲಿಯಲಿ ಗುರಿಯಾಗುವ ಬದಲು ನಿನ್ನ ತಿರಸ್ಕಾರಕ್ಕೆ,..
ಬರಿ ಹೃದಯಕ್ಕೆ ಇಷ್ಟೊಂದು ನೋವು ಯಾಕೆ??
ಆಗಿದೆ ಆರದ  ಗಾಯ ಈ ಹೃದಯಕ್ಕೆ..!


ಮತ್ತೆ ಮತ್ತೆ ಈ ಕಣ್ಣಿಗೆ ನಿನ್ನ ನೋಡುವ ಆಸೆ ಏಕೆ??
ಈ ಹೃದಯಕ್ಕೆ ನಿನ್ನ ಹಾಗೆ  ಯಾರು ಅನ್ನಿಸುವುದಿಲ್ಲವೋ ಹಾಗೆ..!
ಅನಿರೀಕ್ಷಿತವಾಗಿ ಸಿಕ್ಕಿದ ನೀನು..,
ನಾ ನಿರೀಕ್ಷಿಸಿದ ಪ್ರೀತಿ ಕೊಡುವೆ ಏನು??...

ಎಲ್ಲೆಲ್ಲು ನೀನೆ


ಏನೋ ರೋಮಾಂಚನ,


ನನ್ನ ಕಣ್ಣಲಿ ನಿನ್ನ ನೋಡಲು,..!


ನನ್ನ ಕನಸಲು ಬಣ್ಣ,


ಅಲ್ಲೂ ನೀನೆ ಬರಲು..!!!

Tuesday, 9 October 2012

ಅಮ್ಮ ನಿನ್ನ ಮನದಾಳದಲ್ಲಿ



ಅಮ್ಮ ನಿನ್ನ ಮನದಾಳದಲ್ಲಿ  ಅದೆಷ್ಟೊಂದು ಒಲವು ,
ಅರಳೋ ಹೂವಿನ ಚೆಲುವು ...
ನಿನ್ನ  ಪ್ರೀತಿಯ ಮಡಿಲಲ್ಲಿ  ಅದೆಷ್ಟು ಸೆಳೆತ ತಾಯೇ?
ಎಂದು ಕೈ ಬಿಡದ  ಮಾಯೆ...!!

ನಿನ್ನ ಎದೆಗೂದಲ್ಲಿ ತಬ್ಬಿಕೋ ಒಮ್ಮೆ  ನನ್ನ,
ನಮ್ಮಿ  ಜೊತೆ ಎಷ್ಟು ದಿನ ?..
ಪ್ರಪಂಚ ತೋರಿಸಿದ  ಮೊದಲ ಗುರು ನನಗೆ ನೀನು ,
ಉಣಿಸಿದೆ ಪ್ರೀತಿಯ ಜೇನು ..!!

ನೀನೆ ನನ್ನ ಮೊದಲು,
ನೀನೆ ನನಗೆ ಕೊನೆಯೂ,..!
ಬಂದೆ ಬರುವೆನು  ಮತ್ತೆ ಬರುವೆ ನಿನ್ನ ತೊಡೆಗೆ, ..
ನಿನ್ನ ಮಮತೆಯ  ಸಾಗರದ  ಕಡೆಗೆ...!!

Monday, 8 October 2012

ಹೆಣ್ಣಿನ ಅಳಲು



ಇದು ಒಂದು ಹೆಣ್ಣಿನ ನೋವು..,
ಹುಟ್ಟಿದ ಮನೆಯ ಮತ್ತು ಮೆಟ್ಟಿದ ಮನೆಯ ನಡುವಿನ ಕಾವು....!!

ತವರಿನಲ್ಲಿ ಈಕೆ ರಾಣಿ,ಸಿರಿ ತಂದ ಪುಣ್ಯವಂತೆ,..
ಮೆಟ್ಟಿದ ಮನೆಯನ್ನು ಬೆಳಗುತಿಹ ಭಾಗ್ಯವಂತೆ,...
ಇಬ್ಬರೂ ಇವಳಿಗೆ ಎರಡು ಕಣ್ಣಿನಂತೆ,..
ಅರಿಯದೆ ಪೇಚಾಡುತಿಹರು ಪ್ರಾಣಿಗಳಂತೆ,..
ಹುಟ್ಟಿದ ಮನೆಗೆ ತವರಿಗೆ ಸ್ವಂತವೆ....?
ಮೆಟ್ಟಿದ ಮನೆಗೆ ಇವಳು ಅನಾಥಳೆ....?
ಬಾಗಿನ ಪಡೆಯಲು ಬರುವಳು ತವರಿಗೆ,
ಸಿರಿ ಸಂಪದ ತುಂಬಿ ತುಳುಕಲೆಂದು ಹಾರೈಸಿ ನಡೆವಳು,
ಮುತ್ತೈದೆ ಭಾಗ್ಯವ ಪಡೆಯಲೆಂದು ಬೇಡುವಳು,
ಮೆಟ್ಟಿದ ಮನೆಯ ಕ್ಷೇಮಕ್ಕಾಗಿ ದಣಿವಳು.....!!

ಈಗ ಹೇಳಿ ಇವಳು ಯಾರ ಸೊತ್ತು.. ??
ಇವಳಿಗೇನು ಬೇಕೆಂಬುದು ಯಾರಿಗೆ ಗೊತ್ತು... ??

ಎಲ್ಲಿರುವೆ?

ನನ್ನ ಕಲ್ಪನೆಯ ರೂಪವೇ ,
ನನ್ನ ಕಂಗಳ ಕನಸೇ ,
ನನ್ನ ಜೀವನದ ಸಹಬಾಗಿಯೇ ,
ನನ್ನ ಕನಸಿನ ಪ್ರತಿರೂಪವೇ ,
ಬೇಗ ಹೇಳು ನೀ ಎಲ್ಲಿರುವೆ ಎಂದು?

ಕಲ್ಪನೆಯಲ್ಲಿ ಕಟ್ಟಿದ ಕವಿತೆಯೇ,
ಕಣ್ಣಲ್ಲಿ ಅಸೆ ತಂದ ಮಿಂಚೆ,
ಈ ಹೊಸ ಬಾಳಿನ ಅರ್ಥವೇ,
          ನೀನೆ ಹೇಳು ನಾ ಎಲ್ಲಿರುವೆ ಎಂದು??

Friday, 5 October 2012

ನನ್ನ ಜೀವನ ರೂಪ

 

ನನ್ನೊಳಗೆ ಅಡಗಿದ  ಪ್ರೀತಿಯ ರೂಪ,
ಜೀವ ಪಡೆಯಿತು  ಮುದ್ದು ಕಂದನ ರೂಪ..
ನಾ ನಿನ್ನೊಳಗೆ ಇರುವೆನೆಂದು ನೀ ನನಗೆ ತೋರಿದ ಆ ಪರಿ,
ನೋವೆಲ್ಲ ಮರೆಸಿ ನೀಡಿತು ಹಿತವಾದ ಕಚಗುಳಿ...
ಹೇಗಿರುವೆ? ಎಂಥಿರುವೆ? ಎಂದು ಕಾತರಿಸಿತು ಅಂದು ಮನ,
ನನ್ನ ಕಲ್ಪನೆಯು ಚಿತ್ರಿಸಿತು ನಿನ್ನ ಪ್ರತಿರೂಪವನ್ನ...!
ಇರುವೆ ನೀನು ನನ್ನಂತೆ..,
ನೀನಿರಲು ನನಗೇನು ಚಿಂತೆ?..
ನಾ ಮರೆತೆ ನವ ಮಾಸಗಳ ಬಿರು  ಬೇಗುದಿ,
ನೀ ನನ್ನ ಮಡಿಲಲ್ಲಿ ಹುಟ್ಟಿ ಬಂದು ನಕ್ಕ ಕ್ಷಣದಿ..
ದೇವರ  ದೀಪದ ಬೆಳಕಂತೆ ನಿನ್ನ ನಗು,
ಕೊನೆವರೆಗಿನ ಬಂದನವಿದು ನನಗು,ನಿನಗೂ..!!
 ನಿನ್ನ ನಗು ಕಂಡು ನಾ ಮರೆತೆ ನನ್ನೇ,
ನಿನ್ನ ಸ್ಪರ್ಶಕೆ ನಾ ಕರಗಿ ಹೋದೆ ಹೆಣ್ಣೇ ..
ಅಮ್ಮ ಅನ್ನೋ ಆ  ದಿನ ಮರೆವೆ ಜಗವನ್ನೇ,
ನಿನಗಿ ಕಂದ ಮೀಸಲಿಡುವೆ ನನ್ನ ಈ ಬದುಕನ್ನೇ...!!!